== ಕರ್ಬೂಜ ಬೀಜ ಎಣ್ಣೆ == ಕರ್ಬೂಜ ಗಿಡ ಕುಕುರ್ಬಿಟೆಸಿ ಸಸ್ಯ ಕುಟುಂಬಕ್ಕೆ ಸೇರಿದ ಸಸ್ಯ. ಇದರ ಸಸ್ಯ ಶಾಸ್ತ್ರದ ಹೆಸರು ಕುಕುಮಿಸ್ ಮೆಲೊ. ಲಿನ್ನೆ( .). ಇದು ನಿಟಾರಾಗಿ ಬೆಳೆಯುವ ಗಿಡ ಅಲ್ಲ. ಇದು ವ್ಯಾಪಕವಾಗಿ ಬೆಳೆಯಲಾಗುವ ಸಸ್ಯವಾಗಿದೆ. ಬಳ್ಳಿಯ ತರಹ, (ತೆವಳುವ ಹಾಗು ಜೋಲುಬೀಳುವ) ಹೂ ಬಿಡುವ ಸಸ್ಯ. ಸೌತೆಕಾಯಿ ಸಸ್ಯ, ಮತ್ತು ಕುಂಬಳದ ಗಿಡಗಳು ಇದೇ ಸಸ್ಯ ಕುಟುಂಬಕ್ಕೆ ಸೇರಿದ ಗಿಡಗಳು. ಈಸಸ್ಯದ ಮೂಲ ಜನ್ಮಸ್ಥಾನ ಪೆರ್ಸಿಯಾ(ಇರಾನ್)ದ ಸುತ್ತಮುತ್ತಲ ಪಶ್ಚಿಮ ಮತ್ತು ಪೂರ್ವಭಾಗಗಳು ಎಂದು ತಿಳಿದು ಬಂದಿದೆ.ಈಜಿಪ್ಟ್ನಲ್ಲಿದ್ದ ಕ್ರಿ.ಪೂ.೨೪೦೦ ಕಾಲದ ವರ್ಣಚಿತ್ರದಲ್ಲಿ ಕರ್ಬೂಜ ಹೂವನ್ನು ಚಿತ್ರಿಸಲಾಗಿದೆ. ಪೆರ್ಸಿಯಾನಿಂದ ಇದು ಕಾಶ್ಮೀರ, ಭಾರತಕ್ಕೆ ಬಂದಿದೆ. === ಭಾರತೀಯ ಭಾಷೆಗಳಲ್ಲಿ ಕರ್ಬೂಜದ ಸಾಧಾರಣ ಹೆಸರು === ಮರಾಠಿ,ಬಂಗಾಲ=ಖರ್ಬುಜ್() ಒರಿಯ,ಹಿಂದಿ,ಪಂಜಾಬ=ಖರ್ಬೂಜ() ತೆಲುಗು=ಕರ್ಬುಜ,ಮರಿಯು ಖರ್ಬುಜ() ತಮಿಳು=ಕಕ್ಕರಿಕೈ() ಮಲಯಾಳಂ=ಥೈಕುಂಬಲಂ( ) ಅಸ್ಸಾಂ=ಛಿರಲ್() ಗುಜರಾತಿ=ಸಕ್ಕರ್ ತೆತಿ( ) ==== ಹಣ್ಣು-ಬೀಜ ==== ಹಣ್ಣು ಗೋಲಾಕಾರವಾಗಿರುತ್ತದೆ. ಹಣ್ಣಿನ ಮೇಲಿನ ತೊಗಟೆ ಒರಟಾಗಿರುತ್ತದೆ. ಹಣ್ಣು ಸಿಹಿಯಾಗಿರುತ್ತದೆ. ಇದರ ಬೀಜ ಸೌತೆಕಾಯಿ ತರಹ ಇದ್ದು, ಅದಕ್ಕಿಂತ ದೊಡ್ದ ಪ್ರಮಾಣ ದಲ್ಲಿರುತ್ತವೆ. ತಿರುಳು ಪಿಂಕು ಬಣ್ಣದಲ್ಲಿದ್ದು ಸಿಹಿಯಾಗಿರುತ್ತದೆ. ಹಣ್ಣಿನ ಒಳಗೆ ಅನೇಕ ವಿತ್ತನಗಳಿರುತ್ತವೆ. ಬೀಜಗಳು ಅಂಡಾಕಾರವಾಗಿ, ಚಪ್ಪಟೆಯಾಗಿ, ಬೂದಿ ಬಣ್ಣದಲ್ಲಿರುತ್ತವೆ. ಬೀಜದಲ್ಲಿ ೩೩.೦% ಎಣ್ಣೆ ಇರುತ್ತದೆ . ಬೀಜಗಳನ್ನು ಸಿಹಿತಿಂಡಿಗಳ ತಯಾರಿಕೆಯಲ್ಲಿ, ಮತ್ತು ಸಿಹಿ ಉಣಿಸು ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ==== ಎಣ್ಣೆ ಉತ್ಪಾದನೆ ==== ಕರ್ಬೂಜ ಬೀಜದಿಂದ ಎಣ್ಣೆಯನ್ನು ಎಕ್ಸುಪೆಲ್ಲರು ಎನ್ನುವ ಎಣ್ಣೆಯಂತ್ರಗಳ ಸಹಾಯದಿಂದ ತೆಗೆಯುತ್ತಾರೆ. ಹಿಂಡಿಯಲ್ಲಿ ಉಳಿದಿರುವ (೧೦-೧೨%)ಎಣ್ಣೆಯನ್ನು ಸಾಲ್ವೆಂಟ್ ಎಕ್ಸುಟ್ರಾಕ್ಷನು ಪ್ಲಾಂಟ್ನಲ್ಲಿ ನಡಿಸಿ/ತಿರುಗಿಸಿ ಎಣ್ಣೆಯನ್ನು ತೆಗೆಯುತ್ತಾರೆ. === ಎಣ್ಣೆ ಭೌತಿಕ ಗುಣಗಳು-ಎಣ್ಣೆಯಲ್ಲಿರುವ ಕೊಬ್ಬುಆಮ್ಲಗಳು === ಎಣ್ಣೆಯ ಭೌತಿಕ ಗುಣಗಳು ಮತ್ತು ಎಣ್ಣೆಯಲ್ಲಿರುವ ಕೊಬ್ಬು ಆಮ್ಲ ವಿವರಗಳನ್ನು ಕೆಳಗಿನ ಪಟ್ಟಿಗಳಯಲ್ಲಿ ಕೊಡಲಾಗಿದೆ. ಎಣ್ಣೆಯಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೧೦-೧೨% ವರೆಗೆ ಇರುತ್ತವೆ. ಎಣ್ಣೆಯಲ್ಲಿ ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ೮೮-೯೦% ವರೆಗೆ ಇರುತ್ತವೆ .ಇದರಲ್ಲಿ ೨೦ ಕಾರ್ಬನುಗಳಿದ್ದ ಅರಚಿಡಿಕ್ ಪರ್ಯಾಪ್ತ ಕೊಬ್ಬಿನ ಆಮ್ಲವು ಕಡಿಮೆ ಶೇಕಡದಲ್ಲಿ ಕಾಣಿಸುತ್ತದೆ(೦.೮-೧.೦). ಎಣ್ಣೆಯಲ್ಲಿ ಇರುವ ಮಿರಿಸ್ಟಿಕ್, ಪಾಮಿಟಿಕ್, ಸ್ಟಿಯರಿಕ್ ಆಮ್ಲಗಳು ಪರ್ಯಾಪ್ತ ಆಮ್ಲಗಳಾಗಿವೆ. ಎಣ್ಣೆಯಲ್ಲಿ ಒಲಿಕ್ ಆಮ್ಲ ಮತ್ತು ಲಿನೊಲಿಕ್ ಎನ್ನುವ ಅಪರ್ಯಾಪ್ತ ಕೊಬ್ಬಿನ ಆಮ್ಲಗಳು ಇರುತ್ತವೆ. ಕರ್ಬೂಜ ಎಣ್ಣೆ ಭೌತಿಕ ಲಕ್ಷಣಗಳು ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು ==== ಉಲ್ಲೇಖನಗಳು ====